ಹಾರ ಹೊರಟಿಹ ಪ್ರಾಣ ಪಕ್ಷಿಯ ನೋಡಿಲ್ಲಿ
ರವಿ ಮುಳುಗುತಿರೆ ದೂರ ದಿಗಂತದಲಿ
ತಂಗಾಳಿ ತಬ್ಬಿ ಆವರಿಸುತಿರೆ ಮುಸ್ಸಂಜೆಯ ಮಬ್ಬಿನಲಿ
ಇಗೋ ಇಲ್ಲಿ ಎಲ್ಲವನ್ನೂ ಎಲ್ಲರನ್ನೂ ದೂರವಿಟ್ಟು
ಮನಸೇಚ್ಚೆ ಬಾಳಾಸೆಯನೇ ಒತ್ತೆಯಿಟ್ಟು
ದಿಕ್ಕು ದೆಸೆಯನರಿಯದೆಸಾಗುತಿಹ ಪರಿ
ಮೂಲೆ ಮಾಂಸ ತಡಿಕೆ ಬಂದನವ ಮೀರಿ
ಹಾರ ಹೊರಟಿಹ ಪ್ರಾಣ ಪಕ್ಷಿಯ ನೋಡಿಲ್ಲಿ
ಹೊತ್ತು ತಂದ ಕನಸ ಕಂತೆ
ನನಸಾಗಿಸ ಹೋಗಿ ಎಡವಿ ಬಿದ್ದಂತೆ
ಮೇಲೇಳೆಲೆಸದ ಛಲರಹಿತ ಮನ
ಬಗೆಗಣ್ಣು ಕಂಡ ಚಿತ್ರ ವಿಚಿತ್ರ ಜನ
ನಡುವೆ ಉಸಿರುಗಟ್ಟಿಪ ವಾತಾವರಣ
ಪ್ರಾಣವಾಯುವನರಸುತ ಉಸಿರಾಡಲೆಂದೇ ಈ ಕ್ಷಣ
ಹಾರ ಹೊರಟಿಹ ಪ್ರಾಣ ಪಕ್ಷಿಯ ನೋಡಿಲ್ಲಿ
ಕರಾಳ ಛಾಯೆಯ ಭೂತದ ವಿಷಾದ
ದುಃಖ ನಿರಾಶಾಭರಿತ ವರ್ತಮಾನದ ಕ್ರೋಧ
ಕಾತರ ಕಳವಳವಿಲ್ಲದ ಭವಿತವ್ಯವ ಕಾಣಲಿಲ್ಲಿ
ಸಿಕ್ಕಿ ಸಿಲುಕಿ ನಲುಗುತ್ತಾ (ಅ) ವ್ಯವಸ್ತೆಯ ಕೆನ್ನಾಲಿಗೆಯಲ್ಲಿ
ಬಿಟ್ಟರೂ ಬಿಡದಿಹ ಈ ಮಾಯೆಯ ಕುಹರ
ದಾಟಿ ಸಾಗುವಾಸೆ ಇದರಿಂದ ಬಹು ದೂರ ದೂರ
ಹಾರ ಹೊರಟಿಹ ಪ್ರಾಣ ಪಕ್ಷಿಯ ನೋಡಿಲ್ಲಿ
ಭುವಿಯ ಭವ ಜಂಜಾಟದಿ ಬೆಂದು
ತನು ತೆಕ್ಕೆಯ ತೋಳಲಾಟದಿ ನೊಂದು
ಬದುಕ ಬಾಳದೆ ವಿಮುಖವಾಗಿ
ಕಾಯದೆ ಅಭೀಷ್ಟಗಳ ಸಾಕಾರಕ್ಕಾಗಿ
ಬಿಡದೆ ಸುಡುತಿಹ ಒಡಲ ತಾಪಕ್ಕೆದರಿ
ಕಂಡು ಜಗದ ಗಾಣದುರುಳಿನ ಬವಣೆಯ ಪರಿ
ಹಾರ ಹೊರಟಿಹ ಪ್ರಾಣ ಪಕ್ಷಿಯ ನೋಡಿಲ್ಲಿ
ಅತೃಪ್ತಿ ಅಶಾಂತಿ ಹೆಪ್ಪುಗಟ್ಟಿ ಮಂಜಾದ ಮನ
ದ್ವೇಷ ದಳ್ಳುರಿಯಲ್ಲಿ ಬೆಂದು ಹೋದ ಕ್ಷಣ
ಸೇಡಿನ ಜ್ವಾಲೆಯಲಿ ಸುತ್ತ ರೆಕ್ಕೆ ಪುಕ್ಕ
ಲಾವಾರಸ ಉಕ್ಕುತಿಹ ಹೃದಯದೊಳಗಿನ ದುಃಖ
ಹೊರ ಕಕ್ಕಲಾರದೆ ಹಿತವಿಲ್ಲದವರ ನಡುವೆ
ಬಳಿಗಿಂತ ಸಾವಿನುಡಿಯೇ ವಿಹಿತಾವೇನೆ
ಹಾರ ಹೊರಟಿಹ ಪ್ರಾಣ ಪಕ್ಷಿಯ ನೋಡಿಲ್ಲಿ
ಅಂಕು ಡೊಂಕು ದಾರಿಯನಿಚ್ಚಿಸದೆ
ನೇರದಾರಿಗೆ ಮೆಚ್ಚಿ ಸ್ವಚ್ಚನ್ದದೆ
ಹೊರಟಿದೆ ಚಿಂತೆಗೆಲ್ಲಾ ಚಿತೆಯನಿಟ್ಟು
ಭಯ ಬೇನೆ ಬೇಸರಕೆ ಕೊನೆಯ ಕೊಟ್ಟು
ಹಗಲಿರುಳೆನ್ನದ ದೂರದ ದಾರಿಯತ್ತ
ಹೊಸತಾನಕೆ ಕಿವುಡಾಗಿ ಕುರುಡಾಗಿ ಮೂಕವಾಗುತ್ತಾ
ಹಾರ ಹೊರಟಿಹ ಪ್ರಾಣ ಪಕ್ಷಿಯ ನೋಡಿಲ್ಲಿ
ರವಿ ಮುಳುಗುತಿರೆ ದೂರ ದಿಗಂತದಲಿ
ತಂಗಾಳಿ ತಬ್ಬಿ ಆವರಿಸುತಿರೆ ಮುಸ್ಸಂಜೆಯ ಮಬ್ಬಿನಲಿ
ಇಗೋ ಇಲ್ಲಿ ಎಲ್ಲವನ್ನೂ ಎಲ್ಲರನ್ನೂ ದೂರವಿಟ್ಟು
ಮನಸೇಚ್ಚೆ ಬಾಳಾಸೆಯನೇ ಒತ್ತೆಯಿಟ್ಟು
ದಿಕ್ಕು ದೆಸೆಯನರಿಯದೆಸಾಗುತಿಹ ಪರಿ
ಮೂಲೆ ಮಾಂಸ ತಡಿಕೆ ಬಂದನವ ಮೀರಿ
ಹಾರ ಹೊರಟಿಹ ಪ್ರಾಣ ಪಕ್ಷಿಯ ನೋಡಿಲ್ಲಿ
ಹೊತ್ತು ತಂದ ಕನಸ ಕಂತೆ
ನನಸಾಗಿಸ ಹೋಗಿ ಎಡವಿ ಬಿದ್ದಂತೆ
ಮೇಲೇಳೆಲೆಸದ ಛಲರಹಿತ ಮನ
ಬಗೆಗಣ್ಣು ಕಂಡ ಚಿತ್ರ ವಿಚಿತ್ರ ಜನ
ನಡುವೆ ಉಸಿರುಗಟ್ಟಿಪ ವಾತಾವರಣ
ಪ್ರಾಣವಾಯುವನರಸುತ ಉಸಿರಾಡಲೆಂದೇ ಈ ಕ್ಷಣ
ಹಾರ ಹೊರಟಿಹ ಪ್ರಾಣ ಪಕ್ಷಿಯ ನೋಡಿಲ್ಲಿ
ಕರಾಳ ಛಾಯೆಯ ಭೂತದ ವಿಷಾದ
ದುಃಖ ನಿರಾಶಾಭರಿತ ವರ್ತಮಾನದ ಕ್ರೋಧ
ಕಾತರ ಕಳವಳವಿಲ್ಲದ ಭವಿತವ್ಯವ ಕಾಣಲಿಲ್ಲಿ
ಸಿಕ್ಕಿ ಸಿಲುಕಿ ನಲುಗುತ್ತಾ (ಅ) ವ್ಯವಸ್ತೆಯ ಕೆನ್ನಾಲಿಗೆಯಲ್ಲಿ
ಬಿಟ್ಟರೂ ಬಿಡದಿಹ ಈ ಮಾಯೆಯ ಕುಹರ
ದಾಟಿ ಸಾಗುವಾಸೆ ಇದರಿಂದ ಬಹು ದೂರ ದೂರ
ಹಾರ ಹೊರಟಿಹ ಪ್ರಾಣ ಪಕ್ಷಿಯ ನೋಡಿಲ್ಲಿ
ಭುವಿಯ ಭವ ಜಂಜಾಟದಿ ಬೆಂದು
ತನು ತೆಕ್ಕೆಯ ತೋಳಲಾಟದಿ ನೊಂದು
ಬದುಕ ಬಾಳದೆ ವಿಮುಖವಾಗಿ
ಕಾಯದೆ ಅಭೀಷ್ಟಗಳ ಸಾಕಾರಕ್ಕಾಗಿ
ಬಿಡದೆ ಸುಡುತಿಹ ಒಡಲ ತಾಪಕ್ಕೆದರಿ
ಕಂಡು ಜಗದ ಗಾಣದುರುಳಿನ ಬವಣೆಯ ಪರಿ
ಹಾರ ಹೊರಟಿಹ ಪ್ರಾಣ ಪಕ್ಷಿಯ ನೋಡಿಲ್ಲಿ
ಅತೃಪ್ತಿ ಅಶಾಂತಿ ಹೆಪ್ಪುಗಟ್ಟಿ ಮಂಜಾದ ಮನ
ದ್ವೇಷ ದಳ್ಳುರಿಯಲ್ಲಿ ಬೆಂದು ಹೋದ ಕ್ಷಣ
ಸೇಡಿನ ಜ್ವಾಲೆಯಲಿ ಸುತ್ತ ರೆಕ್ಕೆ ಪುಕ್ಕ
ಲಾವಾರಸ ಉಕ್ಕುತಿಹ ಹೃದಯದೊಳಗಿನ ದುಃಖ
ಹೊರ ಕಕ್ಕಲಾರದೆ ಹಿತವಿಲ್ಲದವರ ನಡುವೆ
ಬಳಿಗಿಂತ ಸಾವಿನುಡಿಯೇ ವಿಹಿತಾವೇನೆ
ಹಾರ ಹೊರಟಿಹ ಪ್ರಾಣ ಪಕ್ಷಿಯ ನೋಡಿಲ್ಲಿ
ಅಂಕು ಡೊಂಕು ದಾರಿಯನಿಚ್ಚಿಸದೆ
ನೇರದಾರಿಗೆ ಮೆಚ್ಚಿ ಸ್ವಚ್ಚನ್ದದೆ
ಹೊರಟಿದೆ ಚಿಂತೆಗೆಲ್ಲಾ ಚಿತೆಯನಿಟ್ಟು
ಭಯ ಬೇನೆ ಬೇಸರಕೆ ಕೊನೆಯ ಕೊಟ್ಟು
ಹಗಲಿರುಳೆನ್ನದ ದೂರದ ದಾರಿಯತ್ತ
ಹೊಸತಾನಕೆ ಕಿವುಡಾಗಿ ಕುರುಡಾಗಿ ಮೂಕವಾಗುತ್ತಾ
ಹಾರ ಹೊರಟಿಹ ಪ್ರಾಣ ಪಕ್ಷಿಯ ನೋಡಿಲ್ಲಿ