ಅಗೋ ಅಲ್ಲಿ ಆ ಹಕ್ಕಿ
ಮರಳಿ ಹಾರುತಿದೆ
ತೆನೆ ಪೈರುಗಳ ಲೋಕದಲಿ
ತಣ್ಣನೆ ತೇಲಾಡುತಿದೆ
ಒಲುಮೆಯ ಒನರು ವಯ್ಯಾರದಿ
ಮತ್ತೊದು ನವ ಹಾಡ ಹಾಡುತಿದೆ
ಹೊಸದೊಂದು ಗೂಡನು ನೆಯ್ಯುಥಿದೆ
ಹೊಸ ಆಶಯ ಹೊಸ ಕನಸನು ಕಾಣುತಿದೆ
ಆಗಸದಿ ಕಂಡ ಕೆಂಪು ನೀಲಿ
ನವಿರಾದ ಬಾವನೆಯ ಚಿಮ್ಮುತಿದೆ
ಕಣ್ಣಲ್ಲಿ ಸವಿ ನೆನಪು
ಹೃದಯದಲಿ ಮಂಜೊಂದು ಹನಿಯುತಿದೆ
ಮತ್ತೆ ತನ್ನೊಳವಿನ ಅಂಗಣಕೆ
ಪಯಣವನು ಮಾಡುತಿದೆ